ಯಶ್ ಹುಟ್ಟುಹಬ್ಬ ಜನವರಿ 8 : ಕೆಜಿಎಫ್ ಟೀಸರ್ ರಿಲೀಸ್ | Oneindia Kannada

  • 6 years ago
ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಿಗೆ ಈ ವರ್ಷ ದೊಡ್ಡ ನಿರಾಸೆಯಾಯಿತು. ಯಾಕಂದ್ರೆ, ನಿರೀಕ್ಷೆಯಂತೆ ಈ ವರ್ಷ ಬಿಡುಗಡೆಯಾಗಬೇಕಿದ್ದ 'ಕೆಜಿಎಫ್' ಬರಲೇ ಇಲ್ಲ. ಇತ್ತ ಟೀಸರ್, ಟ್ರೈಲರ್ ಕೂಡ ರಿಲೀಸ್ ಆಗಿಲ್ಲ. ಆದ್ರೆ, ಮೇಕಿಂಗ್ ಚಿತ್ರಗಳಿಂದ ಕುತೂಹಲ ಮಾತ್ರ ದಿನದಿಂದ ಹೆಚ್ಚು ಮಾಡುತ್ತಲೇ ಇದೆ.ಈಗ ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರತಂಡ ತಯಾರಿ ನಡೆಸಿದ್ದು, 'ಕೆಜಿಎಫ್' ಚಿತ್ರದಿಂದ ಭರ್ಜರಿ ಗಿಫ್ಟ್ ನೀಡಲು ಸಿದ್ದವಾಗಿದ್ದಾರೆ. ಜನವರಿ 8 ರಂದು ಯಶ್ ಅವರು ಹುಟ್ಟುಹಬ್ಬವಿದ್ದು, ಅದೇ ದಿನ 'ಕೆಜಿಎಫ್' ಚಿತ್ರದ ಟೀಸರ್ ಬಿಡುಗಡೆ ಮಾಡುವ ಪ್ಲಾನ್ ಆಗಿದೆ. ಅದರಂತೆ ಟೀಸರ್ ಕೂಡ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ತಯಾರಾಗುತ್ತಿರುವ 'ಕೆಜಿಎಫ್' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ, ದಕ್ಷಿಣ ಭಾರತದಲ್ಲೇ ಹೆಚ್ಚು ಸುದ್ದಿ ಮಾಡಿದೆ.

Recommended