Bigg Boss Kannada Season 5 : ಕೃಷಿ ತಾಪಂಡ ಬಗ್ಗೆ ತೇಜಸ್ವಿನಿ ನುಡಿದ ಭವಿಷ್ಯ ನಿಜವಾಯ್ತು | Oneindia Kannada

  • 7 years ago
Bigg Boss Kannada 5: Week 5: Tejaswini's words turns true, Krishi Thapandaot eliminated.


ತೇಜಸ್ವಿನಿ ನುಡಿದ ಭವಿಷ್ಯ ನಿಜ ಆಯ್ತು: ಈ ವಾರ ಕೃಷಿ ಔಟ್ ಆಗೇಬಿಟ್ಟರು! ಇದಕ್ಕೆ ಕಾಕತಾಳೀಯ ಎನ್ನಬೇಕೋ, ಅಥವಾ ಜನರ ನಾಡಿಮಿಡಿತ ತೇಜಸ್ವಿನಿಗೆ ಅರ್ಥವಾಗಿತ್ತೋ, ಇಲ್ಲ ತೇಜಸ್ವಿನಿಗೆ ಸಿಕ್ಸ್ತ್ ಸೆನ್ಸ್ ವರ್ಕ್ ಆಯ್ತು ಅಂತೀರೋ, ನೀವೇ ನಿರ್ಧರಿಸಿ. ಒಟ್ನಲ್ಲಿ, ನಟಿ ತೇಜಸ್ವಿನಿ ಬಾಯಿಂದ ಬಂದ ಮಾತು ನಿಜವಾಗಿದೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಈ ವಾರ ಕೃಷಿ ತಾಪಂಡ ಹೊರಬರುತ್ತಾರೆ ಅಂತ ಕಳೆದ ವಾರವೇ ನಟಿ ತೇಜಸ್ವಿನಿ ಭವಿಷ್ಯ ನುಡಿದಿದ್ದರು. ಅಂದು ತೇಜಸ್ವಿನಿ ಆಡಿದ ಮಾತು ಇಂದು ಅಕ್ಷರಶಃ ಸತ್ಯವಾಗಿದೆ. ನಟಿ ತೇಜಸ್ವಿನಿ ಮಾತಿನಂತೆ ಈ ವಾರ ಕೃಷಿ ತಾಪಂಡ ಔಟ್ ಆಗಿದ್ದಾರೆ.'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪನ ಜೊತೆ' ಕಾರ್ಯಕ್ರಮದಲ್ಲಿ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದ ನಟಿ ತೇಜಸ್ವಿನಿ ವೇದಿಕೆ ಮೇಲೆ ಸುದೀಪ್ ಜೊತೆ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ, ''ಮುಂದಿನ ವಾರ ನಿಮ್ಮ ಜಾಗದಲ್ಲಿ ಯಾರು ನಿಂತುಕೊಳ್ಳಬಹುದು'' ಎಂದು ತೇಜಸ್ವಿನಿಗೆ ಸುದೀಪ್ ಪ್ರಶ್ನೆ ಮಾಡಿದರು. ಅದಕ್ಕೆ 'ಕೃಷಿ ತಾಪಂಡ' ಎಂದು ಉತ್ತರ ಕೊಟ್ಟಿದ್ದರು ನಟಿ ತೇಜಸ್ವಿನಿ.

Recommended